ಬೊಳ್ಳೊಳ್ಳಿಮಾರು ಗುತ್ತು ಪೆರ್ಮುದೆ ಗ್ರಾಮದ ಮೂರನೆಯ ಸ್ಥಾನಮಾನದ ಮನೆ. ಬೊಳ್ಳೊಳ್ಳಿಮಾರು ಗುತ್ತಿನ ದೈವಗಳ ಸೇವೆ ಮಾಡಲು ದೈವಗಳಿಂದ ಹಾಗೂ ಊರವರ ಸಮ್ಮುಖದಲ್ಲಿ ಗಡಿ ನೀಡಿ ಅವರನ್ನು ಮನೆಯ ಯಜಮಾನ ಎಂದು ಗುರುತಿಸುತ್ತಾರೆ. ಇಲ್ಲಿ ಗಡಿ ನೀಡಿದ ವ್ಯಕ್ತಿಗೆ "ಮಾಡ" ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಸುತ್ತು ಪಾಳಿಯ ಈ ಮನೆಯ ಈಶಾನ್ಯ ಭಾಗದಲ್ಲಿ ನಾಗಬನವಿದ್ದು ಇದರಲ್ಲಿ ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯಗಳಿವೆ.
ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯ
ಬೊಳ್ಳೊಳ್ಳಿಮಾರು ಗುತ್ತು ಕುಟುಂಬಸ್ಥರಿಗೆ ಕಾಂತೇರಿ ಧೂಮಾವತಿಯು ಪ್ರಧಾನ ದೈವವಾಗಿದೆ. ದೈವದ ಗುಂಡ ಮತ್ತು ಚಾವಡಿಯು ಮಣ್ಣಿನಿಂದ ಕೂಡಿತ್ತು. ಶುಭ ದಿನಗಳ ಸಂದರ್ಭದಲ್ಲಿ ಚಾವಡಿಯ ಹೊರಗೆ ಸೆಗಣಿ ಸಾರುತ್ತಿದ್ದರು. ೧೯೮೨ರಲ್ಲಿ ಹೊರಗೆ ಸಿಮೆಂಟ್ ಹಾಕಿ ರಿಪೇರಿ ಮಾಡಿಸಲಾಯಿತು.
ಗುಂಡದ ಒಳಗೆ ಹುತ್ತ ಬಂದು ಬಾಗಿಲಿನಲ್ಲಿ ಹುತ್ತ ಬೆಳೆದು ದೈವಸ್ಥಾನವು ೪ ವರ್ಷಗಳಲ್ಲಿ ಅಜೀರ್ಣಾವಸ್ಥೆಯಲ್ಲಿತ್ತು. ನಂತರ ಕುಟುಂಬಿಕರೆಲ್ಲಾ ಒಂದಾಗಿ ಹೊರಗಿನ ಭಾಗವನ್ನು ಬಿಟ್ಟು ಗುಂಡದ ಒಳಭಾಗವನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಕೆಸರುಕಲ್ಲು ಹಾಕಿ ಬೇರೆಯೇ ಪಂಚಾಂಗ ಹಾಕಿ ಗುಂಡವನ್ನು ಪುನರ್ನಿರ್ಮಿಸಲಾಯಿತು.
ಕಾಂತೇರಿ ಧೂಮಾವತಿ ಚಾವಡಿ
೨೫-೦೪-೧೯೯೯ ರಂದು ಕುಟುಂಬಿಕರು ಸೇರಿ ವಿಜೃಂಭಣೆಯಿಂದ ಬ್ರಹ್ಮಕಲಶ ನಡೆಯಿತು.
೦೮-೦೨-೨೦೦೦ - ೦೯-೦೨-೨೦೦೦ ವರೆಗೆ ವಿಜೃಂಭಣೆಯಿಂದ ಧರ್ಮನೇಮೋತ್ಸವವು ನಡೆಯಿತು.
ಕಾಂತೇರಿ ಧೂಮಾವತಿಯ ಗುಂಡದೊಳಗೆ ಧೂಮಾವತಿಗೆ ಬಂಗಾರದ ನಾಲಗೆಯಿಂದ ಕೂಡಿದ ಮುಗವಿದೆ ಜೊತೆಗೆ ಅಗಲವಾದ ಮತ್ತು ಉದ್ದ ಇರುವ ಬೆಳ್ಳಿಯ ಖಡ್ಗ ಜುಮಾದಿಗಿದ್ದು, ಅಗಲ ಮತ್ತು ಉದ್ದದಲ್ಲಿ ಕಡಿಮೆ ಇರುವ ಬೆಳ್ಳಿಯ ಖಡ್ಗವು ಬಂಟನದ್ದಾಗಿದೆ. ಮನೆಯ ದೈವದ ಗುಂಡದ ಒಳಗೆ ಗಡಿಹಿಡಿದವರು (ಮಾಡ) ಅಥವಾ ಪೆಜತ್ತಾಯರು (ಬ್ರಾಹ್ಮಣರು) ಅಥವಾ ಮುಕ್ಕಾಲ್ದಿಯು ಹೋಗಬಹುದು. ಬೇರೆ ಯಾರು ಒಳ ಹೋಗುವ ಹಾಗಿಲ್ಲ.
ಕಾಂತೇರಿ ಧೂಮಾವತಿಯ ಗುಂಡ
ಗುತ್ತಿನ ಚಾವಡಿಯಲ್ಲಿ ಸತ್ಯ ದೇವತೆಯ ಸಾನಿಧ್ಯವಿದೆ. ಮೊದಲು ಬರೀ ಚಿಕ್ಕ ಮನೆ ಇತ್ತು. ೧೯೯೦ ರಲ್ಲಿ ಕುಟುಂಬಿಕರೆಲ್ಲಾ ಒಟ್ಟಾಗಿ ಮಂಚ, ಬೆಳ್ಳಿಯಮೂರ್ತಿ ಮಾಡಿ ಬ್ರಹ್ಮ ಕಲಶ ಮಾಡಲಾಯಿತು.
ಸತ್ಯ ದೇವತೆ
ಮನೆಯ ಎಡಭಾಗದ ಎತ್ತರ ಪ್ರದೇಶದಲ್ಲಿ ಪಿಲಿಚಾಮಂಡಿ ಮತ್ತು ಬ್ರಹ್ಮನ್ ದೇವತೆಯ ಸ್ಥಾನಗಳಿವೆ. ಹುಲಿ ಚಾಮುಂಡಿಯು ದೇವಿಯ ಅಂಶವಾಗಿದೆ. ಈ ದೈವವು ಬಾಳೊಳಿನಾಡಿನ ಮನೆಯವರ ಆರಾಧ್ಯ ದೈವವಾಗಿತ್ತು.
Saturday, February 27, 2010
Subscribe to:
Post Comments (Atom)

No comments:
Post a Comment